: 98455 22020

Description

ಡ್ರೈ ಫ್ರುಟ್ಸ್‍ಗಳ ನಿಯಮಿತವಾದ ಸೇವನೆಯಿಂದ ಆರೋಗ್ಯ ವರ್ಧಿಸುತ್ತದೆ. ಹಲವು ರೋಗಗಳು ಬರದಂತೆಯೂ ತಡೆಗಟ್ಟುವಲ್ಲಿ ಒಣ ಹಣ್ಣುಗಳ ಪಾತ್ರ ಮಹತ್ತರವಾದದ್ದು.

ಗೋಡಂಬಿ
ಗೋಡಂಬಿಯು ಆಹಾರದ ಫೈಬರ್ ಅಂಶ ಹೊಂದಿದ್ದು ಇದರ ಸೇವನೆಯಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಜೀರ್ಣಾಂಗ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಗೋಡಂಬಿ ಎಲ್‍ಡಿಎಲ್ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಎಚ್ ಡಿ ಎಲ್ ಕೊಲೆಸ್ಟ್ರಾಲ್ ಒಯ್ಯುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಗೋಡಂಬಿಯಲ್ಲಿ ಒಮೆಗಾ 3
ಅಂಶವಿರುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೂ ಸಹ ಗೋಡಂಬಿಯನ್ನು ತಿನ್ನುವುದರಿಂದ ಕಣ್ಣಿಗೆ ಸೋಂಕು ಬರದಂತೆ ತಡೆಯುತ್ತದೆ. ಯಾಕೆಂದರೆ ಇದು ಪ್ರಬಲ ಅ್ಯಂಟಿಆಕ್ಸಿಡೆಂಟ್ ಪಿಗ್ಮೆಂಟ್ ಹೊಂದಿದೆ. ಹೀಗಾಗಿ ರೆಟಿನಾ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿ ಮಾಡಲಿದ್ದು ಇದರಿಂದ ಹಾನಿಕಾರಕ ಯುವಿ ಕಿರಣಗಳನ್ನು ತಡೆಯುತ್ತದೆ. ಕೂದಲಿಗೆ ನಯವಾದ ವಿನ್ಯಾಸವನ್ನು ನೀಡುತ್ತದೆ.

ಬಾದಾಮಿ
ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದ ಅದರಲ್ಲಿ ಅಡಕವಾಗಿರುವ ಪೋಷಕಾಂಶಗಳು ಪೂರ್ಣ ಪ್ರಮಾಣದಲ್ಲಿ ಶರೀರಕ್ಕೆ ಲಭ್ಯವಾಗುತ್ತದೆ. ನೀರಿನಲ್ಲಿರುವಾಗ ಬಾದಾಮಿ ಬೀಜಗಳ ಲೈಪೇಸ್ ಎಂಬ ಹೆಸರಿನ ಕಿಣ್ವಗಳನ್ನು ಬಿಡುಗಡೆಗೊಳಿಸುತ್ತದೆ. ಹಾಗೂ ಈ ಕಿಣ್ವವು ಕೊಬ್ಬುಗಳ ಪಚನಕ್ರಿಯೆಯಲ್ಲಿ ನೆರವಾಗುತ್ತದೆ. ಬಾದಾಮಿ ಬೀಜಗಳು ವಿಟಮಿನ್ ‘ಇ’ ಯನ್ನು ಸಮೃದ್ಧವಾಗಿ ಒಳಗೊಂಡಿರುವುದರಿಂದ ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲನ್ನು ತಗ್ಗಿಸುತ್ತದೆ. ಇದರ ನೇರ ಪರಿಣಾಮವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೇಲೆ ಧನಾತ್ಮಕವಾಗಿ ಆಗುತ್ತದೆ. ಬಾದಾಮಿ ಬೀಜಗಳಲ್ಲಿರುವ ಏಕಪರ್ಯಾಪ್ತಗಳು ನಮ್ಮ ಹಸಿವನ್ನು ಇಂಗಿಸಿಬಿಡುತ್ತವೆ. ಬಾದಾಮಿ ಬೀಜಗಳಲ್ಲಿರುವ ಫೋಟಿಕ್ ಆಮ್ಲವು ರಕ್ತನಾಳಗಳಲ್ಲಿ ಅಡಚಣೆ ಉಂಟಾಗದಂತೆ ತಡೆಯಬಲ್ಲದು. ನೆನೆಸಿಟ್ಟಿರುವ ಬಾದಾಮಿ ಬೀಜಗಳನ್ನು ಸೇವಿಸುವುದರ ಮೂಲಕ ಶುಕ್ರ ಗ್ರಂಥಿಯ ಹಾಗೂ ಸ್ತನಗಳ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಬಾದಾಮಿಯ ಸೇವನೆಯಿಂದ ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದು ಸ್ಮರಣ ಶಕ್ತಿಯನ್ನು ಸುಧಾರಿಸುತ್ತದೆ.

ಪಿಸ್ತಾ
ಪಿಸ್ತಾಗಳ ಸೇವನೆಯಿಂದ ದೇಹದ ಬಹುತೇಕ ಎಲ್ಲಾ ಅಂಗಗಳಿಗೆ ಒಂದಲ್ಲಾ ಒಂದು ಪ್ರಯೋಜನವಿದ್ದೇ ಇದೆ. ಇವುಗಳ ಸೇವನೆಯಿಂದ ಕಣ್ಣು ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ದೊರೆಯುತ್ತದೆ. ಹಾಗೂ ಈ ಮೂಲಕ ಕಣ್ಣುಗಳ ಸವೆತದಿಂದ ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ6 ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪಿಸ್ತಾ ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟ್ರಾಲ್‍ಗಳ ಮಟ್ಟ ಆರೋಗ್ಯಕರ ಮಿತಿಗಳಲ್ಲಿರಲು ಸಾಧ್ಯವಾಗುತ್ತದೆ. ಈ ಮೂಲಕ ಹೃದಯಾಘಾತ ಮತ್ತು ಹೃದಯಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ.ಪಿಸ್ತಾ ಸೇವನೆಯ ಮೂಲಕ ಜೀವಕೋಶಗಳ ಸವೆತ ತಡೆಯುತ್ತದೆ. ಹಾಗೂ ತಾರುಣ್ಯವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಶಕ್ತಿ ತುಂಬಿದ್ದು ಇವುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಚುರುಕುತನ ಲಭಿಸುತ್ತದೆ. ಪಿಸ್ತಾಗಳ ಸೇವನೆಯಿಂದ ರಕ್ತ ಪರಿಚಲನೆ ಹೆಚ್ಚುತ್ತದೆ ಹಾಗೂ ದೇಹದೆಲ್ಲೆಡೆ ಆಮ್ಲಜನಕ ಪೂರೈಕೆಯಾಗಲು ನೆರವಾಗುತ್ತದೆ. ಇದರಿಂದ ಹಲವು ಅಂಗಗಳು ಸವೆತದಿಂದ ರಕ್ಷಣೆ ಪಡೆಯುತ್ತವೆ.

ಅಂಜೂರ
ಅಂಜೂರ ಆರೋಗ್ಯದಾಯಕ ಹಣ್ಣು. ಇದು ಸುಣ್ಣದಂಶ, ಕಬ್ಬಿಣ, ರಂಜಕ, ‘ಎ’ ಜೀವಸತ್ವ ಹಾಗೂ ‘ಸಿ’ ಜೀವಸತ್ವದೊಂದಿಗೆ ಅಲ್ಪಪ್ರಮಾಣದ ‘ಬಿ’ ಜೀವಸತ್ವವನ್ನು ಹೊಂದಿದೆ. ಒಣ ಅಂಜೂರವು ಅತೀ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಬಿಳಿಹಿಟ್ಟಿನಿಂದ ತಯಾರಿಸಲಾದ ಆಹಾರ ಪದಾರ್ಥಗಳೊಂದಿಗೆ ಒಣ ಅಂಜೂರವನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಕಫ ಸಮೇತವಾಗಿ ಕಾಣಿಸಿಕೊಳ್ಳುವ ಕೆಮ್ಮಿಗೂ ಸಹ ಅಂಜೂರ ರಾಮಬಾಣವಾಗಿದೆ. ದೀರ್ಘ ಕಾಲಗಳಿಂದ ಬಾಧಿಸುತ್ತಲಿರುವ ಪಾದಗಳಲ್ಲಿನ ಆಣಿಗಳ ಮೇಲೆ ಹಸಿರು ಅಂಜೂರದ ರಸದಿಂದ ತೆಗೆದ ಹಾಲನ್ನು ಲೇಪಿಸಿದರೆ ಶೀಘ್ರ ನಿವಾರಣೆಯಾಗುತ್ತದೆ. 2-3 ಒಣ ಅಂಜೂರಗಳನ್ನು ಹಿಂದಿನ ದಿನ ನೀರಿನಲ್ಲಿ ನೆನೆಹಾಕಿ ಮರುದಿನ ಬೆಳಿಗ್ಗೆ ನೀರಿನೊಂದಿಗೆ ಅವುಗಳನ್ನು ಸೇವಿಸಬೇಕು. 3-4 ವಾರಗಳವರೆಗೆ ಈ ಕ್ರಮ ಅಳವಡಿಸಿದರೆ ಮೂಲವ್ಯಾಧಿ ಸಂಪೂರ್ಣ ನಿವಾರಣೆಯಾಗುತ್ತದೆ.

ಖರ್ಜೂರ
ಚಳಿಗಾಲದಲ್ಲಿ ಇದು ನಮ್ಮ ಆರೋಗ್ಯಕ್ಕೆ ತುಂಬಾ ಉಪಯೋಗಿ. ಒಣ ಖರ್ಜೂರದಲ್ಲಿ ಕೊಬ್ಬಿನ ಅಂಶವು ತುಂಬಾ ಕಡಿಮೆ ಇದೆ ಮತ್ತು ಇದರಲ್ಲಿ ಕೊಲೆಸ್ಟ್ರಾಲ್ ಮಟ್ಟವು ನಗಣ್ಯ. ಒಣ ಖರ್ಜೂರವು ಕಡಿಮೆ ಸಾಂಧ್ರತೆಯ ಲಿಪೋಪ್ರೊಟೀನ್ ಅಥವಾ ರಕ್ತದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲನ್ನು ಇದು ನಿಯಂತ್ರಣದಲ್ಲಿ ಇಡುವುದು. ಇದರ ಹೊರತಾಗಿ ಇದರಲ್ಲಿ ಸೋಡಿಯಂ ತುಂಬಾ ಕಡಿಮೆ ಇದೆ ಮತ್ತು ಪೊಟಾಶಿಯಂ ಸಮೃದ್ಧವಾಗಿದೆ. ಇದರಿಂದ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಲಿದೆ. ಒಣ ಖರ್ಜೂರದಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶಗಳು ಇವೆ. ಇದು ಜೀರ್ಣ ಕ್ರಿಯೆಯ ರಸದ ಸ್ರವಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಸೇವಿಸಿದ ಆಹಾರವನ್ನು ಸರಿಯಾಗಿ ಹೀರಿಕೊಳ್ಳಲು ಸಹಕಾರಿ. ಒಣ ಖರ್ಜೂರ ಸೇವನೆ ಮಾಡುವುದರಿಂದ ಮಲಬದ್ಧತೆಗೆ ಪರಿಹಾರ ಸಿಗುತ್ತದೆ. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶ ಸಮೃದ್ಧವಾಗಿರುವುದರಿಂದ ಒಳ್ಳೆಯ ಆಹಾರವಾಗಿದೆ.

ಒಣದ್ರಾಕ್ಷಿ
ಶುದ್ಧವಾದ ನೀರಿನಲ್ಲಿ ನೆನೆಸಿಟ್ಟ 5 – 6 ಒಣ ದ್ರಾಕ್ಷಿಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕ್ರಮೇಣ ಮಲ ಬದ್ಧತೆ ಶಮನವಾಗುವುದು.

ಅರೆ…!!! ಇಷ್ಟೆಲ್ಲಾ ಔಷಧಿ ಗುಣಗಳುಳ್ಳ ಸಮಗ್ರ ಡ್ರೈ ಫ್ರುಟ್ಸ್‍ಗಳ ಮಳಿಗೆ…ನಮ್ಮ ಪುತ್ತೂರಿನಲ್ಲಿಯೂ ಇದ್ದರೆ ಎಷ್ಟು ಚೆನ್ನಾಗಿರ್ತಿತ್ತು…ಎಂದು ನೀವಂದುಕೊಳ್ಳುತ್ತಿದ್ದರೆ..ನಿಮಗೆ ಈ ಲೇಖನದ ಮೂಲಕ ಪರಿಚಯಿಸುತ್ತಿದ್ದೇನೆ “ಲಹರಿ ಹೈಜಿನಿಕ್ಸ್”. ಇಲ್ಲಿಯ ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಸಭೆ ಸಮಾರಂಭಗಳಲ್ಲಿ ಅತಿಥಿ ಅಭ್ಯಾಗತರಿಗೆ ನೀಡಲೆಂದೇ ವಿಶಿಷ್ಟ ಡ್ರೈ ಫ್ರೂಟ್ಸ್ ಪ್ಯಾಕ್
ಸನ್ಮಾನ ಸಮಾರಂಭಗಳಿಗೆಂದೇ ವಿನ್ಯಾಸ ಮಾಡಿರುವ ಅಂದದ ಡ್ರೈ ಫ್ರುಟ್ಸ್ ಬಂಚ್
ಬರ್ತ್ ಡೇ, ವೆಡ್ಡಿಂಗ್ ಆನಿವರ್ಸರಿ, ಬೇಬಿ ಶವರ್ ಹಾಗೂ ಫ್ರೆಂಡ್‍ಶಿಪ್ ಪಾರ್ಟಿಗಳಿಗಾಗಿ ಚಾಕ್ಲೇಟ್ಸ್ ಹಾಗೂ ಡ್ರೈ ಫ್ರೂಟ್ಸ್‍ಗಳ ಗಿಫ್ಟ್ ಪ್ಯಾಕ್‍ಗಳು
ಹಬ್ಬಗಳ ಆಚರಣೆಯ ಸವಿಯನ್ನು ಹೆಚ್ಚಿಸಲು ಗ್ರಾಹಕರ ಅಪೇಕ್ಷೆಗನುಗುಣವಾಗಿ ಡ್ರೈ ಫ್ರುಟ್ಸ್, ಚಾಕ್ಲೇಟ್ಸ್‍ಗಳ ಆಕರ್ಷಕ ಗಿಫ್ಟ್ ಪ್ಯಾಕ್‍ಗಳು
 ಸಣ್ಣ ಪ್ಯಾಕ್ ದೊಡ್ಡ ಪ್ಯಾಕ್ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಗಿಪ್ಟ್ ಪ್ಯಾಕ್ ನ ಮಾಡಿಸಿಕೊಳ್ಳ ಬಹುದು.
ದೇಶ ವಿದೇಶಗಳ ಚಾಕ್ಲೇಟ್ಸ್‍ಗಳು
ವಿವಿಧ ಹಣ್ಣುಗಳ ಬೀಜಗಳು
ಗಿಫ್ಟ್ ಹ್ಯಾಂಪರ್ಸ್

ಅಂದ ಹಾಗೆ ಲಹರಿ ಹೈಜಿನಿಕ್ಸ್ ಎಲ್ಲಿದೆ? ಸಂಪರ್ಕ ವಿಳಾಸ ಹಾಗೂ ಮೊಬೈಲ್ ಫೋನ್ ಸಂಖ್ಯೆ ಇತ್ಯಾದಿ ವಿವರಗಳು ಇಲ್ಲಿದೆ.
ಲಹರಿ ಹೈಜಿನಿಕ್ಸ್, ಅರುಣ ಥಿಯೇಟರ್ ಬಳಿ, ಕೆ.ವಿ.ಶೆಣೈ ಪೆಟ್ರೋಲ್ ಬಂಕ್ ಎದುರು, ಮುಖ್ಯ ರಸ್ತೆ, ಪುತ್ತೂರು. ಮೊಬೈಲ್ ನಂ – 7624957763, 9481847763

Related Posts

Rotary Club Puttur Yuva organised ‘Aatida Koota’ event on August 15th, 2019 here at Sri Kaveri ...
Team Southcanara
August 17, 2019
From women, of women, for women is the motto of Women’s World, Puttur. Growing day by day and ...
Team Southcanara
August 14, 2019
ಆಕರ್ಷಣ್ ರೆಡಿ ವಾಲ್ ಇರುವಾಗ ಕಂಪೌಂಡ್ ನಿರ್ಮಾಣ ಕಾರ್ಯ ಬಲು ಸುಲಭ. ಆಕರ್ಷಣ್‍ನ ಈ ವಿಶೇಷ ಆಕರ್ಷಣೆ ಬಗ್ಗೆ ನಿಮಗೆ ಹೇಳಲೇ ...
Team Southcanara
August 9, 2019